For the best experience, open
https://m.samyuktakarnataka.in
on your mobile browser.

ಹೇ ಪ್ರಭೋ ಸಂಸಾರ ಕಳೆದು ಮೋಕ್ಷ ಕೊಡು

04:01 AM Aug 07, 2024 IST | Samyukta Karnataka
ಹೇ ಪ್ರಭೋ ಸಂಸಾರ ಕಳೆದು ಮೋಕ್ಷ ಕೊಡು

ಸಾಮಾನ್ಯವಾಗಿ ವೇದಾಂಶ ಪಂಚರಾತ್ರಾಣಿ, ಪುರಾಣೇತಿಹಾಸ ಪುರಾಣಕಾನ, ಜ್ಞಾತ್ವ ವಿಷ್ಣು ಪರಾನೇವ.. ಮುಚ್ಚತೆ ನ್ಯಾನ್ಯಥಾಕ್ವಚಿತು.' ಒಬ್ಬ ಯೋಗ್ಯನಾದ ಶಾಸ್ತ್ರಗಳನ್ನು ಓದುವಂತಹ ಅಧಿಕಾರವಿದ್ದ ಜೀವನನ್ನು ತೆಗೆದುಕೊಂಡರೆ, ಕಡ್ಡಾಯವಾಗಿ ಶ್ರೀಮದಾಚಾರ್ಯರು "ಮಹಾಭಾರತದ ತಾತ್ಪರ್ಯ ನಿರ್ಣಯದಲ್ಲಿ ವೇದಗಳು ಪಂಚರಾತ್ರ ಇತಿಹಾಸ ಪುರಾಣ ಇವುಗಳೆಲ್ಲವನ್ನು ವಿಷ್ಣು ಪರ ಎಂದು ತಿಳಿದರೆ ಮಾತ್ರ ಮೋಕ್ಷ ಇಲ್ಲದಿದ್ದರೆ ಇಲ್ಲ" ಎಂದು ಹೇಳುತ್ತಾರೆ. ವೇದಗಳು ಪುರಾಣಗಳನ್ನೆಲ್ಲ ಸಾಮಾನ್ಯವಾಗಿ ಜೀವ ತಿಳಿದಿರುತ್ತಾನೆ. ಇನ್ನ ಅನೇಕ ಕರ್ತವ್ಯ ಕರ್ಮಗಳನ್ನು ಮಾಡಿ ಒಂದು ಅವಸ್ಥೆಯನ್ನು ಮುಟ್ಟಿರುತ್ತಾನೆ. ಇದು ಜೀವನ ಯೋಗ್ಯತೆ. ಇದೆಲ್ಲ ಒಬ್ಬ ಸಾಮಾನ್ಯ ಜೀವರ ಬಗ್ಗೆ ಹಗಲು ರಾತ್ರಿಗಳಂತೆ ದುಃಖ ಸುಖಗಳನ್ನು ಹೊಂದುತ್ತಾನೆ ಜೀವ.ಸುಖಸ್ಯಾ ನಂತರಂ ದುಖಂ ದುಃಖಸ್ಯ ನಂತರಂ ಸುಖಂ'
ಇದು ಸಂಸಾರದ ಹಣೆಬರಹ. ಅಥವಾ ಆನಂದವೇ ಆನಂದ ದುಃಖದ ಸಂಪರ್ಕವಿಲ್ಲದ ಆನಂದ. ಇದು ಅವನ ಆಸ್ತಿ. ಇನ್ನೊಬ್ಬರನ್ನು ತಡೆಯುವ ಶಕ್ತಿ. ಓಜಃಸ, ಸಹನ ಮಾಡುವ ಶಕ್ತಿ, ಶುದ್ಧವಾದ ಯಥಾರ್ಥವಾದ ನಿಖರ ತಿಳಿವಳಿಕೆ, ಈ ಮೊದಲಾದ ಗುಣಗಳು ಈ ಜೀವರ ಸ್ವರೂಪದಲ್ಲಿದೆ.
ಎಲ್ಲಕ್ಕೂ ಮೇಲಾಗಿ ಮನುಷ್ಯನಿಗೆ ಬೇಕಾದದ್ದು ಅಪಾರವಾದ ಆನಂದ, ಮನುಷ್ಯ ಇಷ್ಟೆಲ್ಲ ಕಷ್ಟಪಟ್ಟು ಗಳಿಸುವುದು ಏಕೆ? ಹಣಕ್ಕಾಗಿ. ಹಣ ಏನು ಉಪಯೋಗಕ್ಕೆ ಸುಖಕ್ಕಾಗಿ.. ಸುಖ ಯಾವುದಕ್ಕೆ?
ಎಂದರೆ ಇದಕ್ಕೆ ಮಾತ್ರ ಉತ್ತರವಿಲ್ಲ. ಸ್ವರಸ ಸುಂದರ ಒಂದು ಇನ್ನೊಂದಕ್ಕಾಗಿ ಇನ್ನೊಂದು ಮಗದೊಂದಕ್ಕಾಗಿ ಹೀಗೆ ಮುಂದುವರೆಯುತ್ತಾ ಹೋಗುತ್ತದೆ ಅದೇ ಸುಖ.
ಅಂತಹ ಸುಖ ಅದು ಅಪಾರಮಟ್ಟವಾಗಿ ಜೀವನದಲ್ಲಿದೆ. ಆದರೆ ಜೀವರೊಳಗಿದೆ ಆದರೆ ಜೀವನ ಉಪಯೋಗಕ್ಕೆ ಬರ್ತಾ ಇಲ್ಲ. ಇವನ ಉಪಯೋಗಕ್ಕೆ ಬಂದಾಗ ಅದು ಮೋಕ್ಷ ಅದಕ್ಕಾಗಿ ಪ್ರಯತ್ನ. ಇಷ್ಟ ಅಂದರೆ ದುಡ್ಡು ಅಧಿಕಾರ ಬಡ್ತಿ ಅಲ್ಲವೇ ಅಲ್ಲ. ಯಾವದು ನಮ್ಮದೇ ಆಸ್ತಿ ನಮ್ಮ ಹೆಸರಲ್ಲಿ ಇದೆಯೋ ಅದು ನಮ್ಮ ಉಪಗೋಗಕ್ಕೆ ಬರಬೇಕು ಅದುವೇ ಇಷ್ಟ ಪ್ರಾಪ್ತಿ.
ಅನಿಷ್ಟವೆಂದರೆ ಯಾವುದು ನಮ್ಮದು ನಿಜವಾಗಿ ಅಲ್ಲವೇ ಅಲ್ಲ. ಯಾವದು ನಮ್ಮ ಜೀವನ ಸ್ವರೂಪದಲ್ಲಿಲ್ಲವೂ ಅದನ್ನು ಹೊರಗಿದ್ದು ಅನುಭವಿಸುತ್ತೇವೆ. ಅದು ತಪ್ಪಬೇಕು ಅದೇ ಅನಿಷ್ಟ. ತಪ್ಪು ತಿಳಿವಳಿಕೆ ಸಂಶಯ ದುಃಖ, ಭಯ, ಇದ್ಯಾವದು ಉಪಯೋಗಕ್ಕೆ ಇಲ್ಲ ಇದ್ಯಾವುದೋ ನಮ್ಮದಲ್ಲ. ಆನಂದ ಧ್ಯಾನ, ಭಕ್ತಿ ಛಲ ನಮ್ಮ ಸ್ವರೂಪದಲ್ಲಿದೆ ಇದೆಲ್ಲ ಬಳ್ಳಿ ಬಂಗಾರವಿದ್ದಂತೆ.
ನಮ್ಮದೇ ಆಸ್ತಿ ನಮ್ಮ ತಲೆತಲಾಂತರದಿಂದ ಬಂದಿದ್ದು ಹಾಗೆ ನಮ್ಮ ಸ್ವರೂಪದಲ್ಲಿ ಅನಾದಿಕಾಲದಿಂದ, ದೇವರು ನಮ್ಮನ್ನು ಸೃಷ್ಟಿ ಮಾಡಿದಾಗಿನಿಂದ ನಮ್ಮಲ್ಲಿ ಇರುವುದು ಅದು ನಮ್ಮ ಉಪಯೋಗಕ್ಕೆ ಬರಲಿ. ಇದೇ ನಿವಾರ ಅನಿಷ್ಟಾಣಿ ಸಾಧವ ಇಷ್ಟಾಣಿ ಮಾಧವ ಸಂಸಾರವನ್ನು ಕಳೆದು ಮೋಕ್ಷವನ್ನು ಕೊಡು ಎಂದು ನಾವು ವೆಂಕಟೇಶ ದೇವರಲ್ಲಿ ಕೇಳುವ ಪ್ರಾರ್ಥನೆ