೧೯ನೇ ಕ್ರಸ್ಟ್ ಗೇಟ್ ಅಳವಡಿಕೆಗೆ ಪೂಜೆಯಿಂದ ಚಾಲನೆ
ಬಳ್ಳಾರಿ: ತುಂಗಭದ್ರಾ ಜಲಾಶಯದ ೧೯ ನೇ ಕ್ರಸ್ಟ್ ಗೇಟ್ ಅಳವಡಿಕೆಗೆ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ತುಂಗಭದ್ರಾ ಜಲಾಶಯದ ಗೇಟ್ 19 ರ ಬಳಿ ಅರ್ಚಕ ವಾದಿರಾಜ ಆಚಾರ್ಯ ಪೂಜೆ ಮಾಡಿದರು. ತಜ್ಞ ಕನ್ಹಯ್ಯ ನಾಯ್ಡು,
ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್, ಉಸ್ತುವಾರಿ ಕಾರ್ಯದರ್ಶಿ ನವೀನ್, ಡಿಸಿ ದಿವಾಕರ್ ಇತರರು ಪೂಜೆಯಲ್ಲಿ ಭಾಗಿಯಾದರು.
ಪೂಜೆಯ ಬಳಿಕ ಮಾತನಾಡಿದ ವಿಜಯನಗರ, ಬಳ್ಳಾರಿ ಉಸ್ತುವಾರಿ ಸಚಿವ ಸದ್ಯ ತುಂಗಭದ್ರಾ ಜಲಾಶಯಲ್ಲಿ ೯೨ ಟಿಎಂಸಿ ನೀರಿದೆ. ಇನ್ನೂ ನೀರಿನ ಮಟ್ಟ ಕಡಿಮೆಯಾಗಬೇಕು. ನೀರು ಪೋಲಾಗದಂತೆ ಗೇಟು ಅಳವಡಿಕೆ ಕಾರ್ಯ ಆರಂಭಿಸಲಾಗುತ್ತಿದೆ. ತಜ್ಞರು, ಟಿಬಿ ಬೋಡ್೯ ಅಧಿಕಾರಿಗಳು, ನುರಿತ ಎಂಜಿನಿಯರ್ ಗಳು, ಕಾರ್ಮಿಕರ ಮೂಲಕ ಕೆಲಸ ಆರಂಭಿಸಲಾಗುತ್ತಿದೆ. ಸದ್ಯ ಎ ಟೀಂ ಈಗ ಕಾರ್ಯಚರಣೆಗೆ ಇಳಿದಿದೆ. ಇದು ಯಾವ ರೀತಿ ಸ್ಪಂದನೆ ದೊರೆಯುತ್ತದೆ ಎನ್ನುವ ಆಧಾರದ ಮೇಲೆ ಬಿ ಟೀಂ ಕೆಲಸಕ್ಕೆ ಇಳಿಯಲಿದೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ಈಗ ಬೆಳೆದ ಬೆಳೆಗೆ ನಷ್ಟವಾಗದಂತೆ ಎಲ್ಲ ರೀತಿಯ ಪರಿಪೂರ್ಣ ಸಿದ್ದತೆಯೊಂದಿಗೆ ಗೇಟ ಅಳವಡಿಕೆ ನಡೆಯಲಿದೆ ಎಂದರು.