೧೯ ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ
12:14 AM Jan 25, 2024 IST
|
Samyukta Karnataka
ನವದೆಹಲಿ: ಸೋಮವಾರ ಇಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟçಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ೧೯ ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ಶೌರ್ಯ, ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ವಿಭಾಗಗಳಲ್ಲಿ ತಲಾ ಒಂದು ಮಗು, ಸಮಾಜ ಸೇವೆಯ ವಿಭಾಗದಲ್ಲಿ ನಾಲ್ಕು ಮಕ್ಕಳು, ಕ್ರೀಡಾ ವಿಭಾಗದಲ್ಲಿ ಐದು ಮಕ್ಕಳು ಮತ್ತು ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಏಳು ಮಕ್ಕಳು ಪ್ರಶಸ್ತಿ ಪಡೆದರು. ಈ ಸಂದರ್ಭದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮುರ್ಮು ಅವರು, ಯುವ ಸಾಧಕರ ಅದ್ಭುತ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಪ್ರೋತ್ಸಾಹಿಸಲು ಈ ಪ್ರಶಸ್ತಿ ಪ್ರದಾನ ಒಂದು ಅವಕಾಶವಾಗಿದೆ. ಮಕ್ಕಳ ಸಾಧನೆಯನ್ನು ಕೊಂಡಾಡುವ ಅವಕಾಶವೂ ಹೌದು ಎಂದು ಹೇಳಿದರು. ಎಲ್ಲಾ ಮಕ್ಕಳ ಅತ್ಯುತ್ತಮ ಕೆಲಸಕ್ಕಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
Next Article