For the best experience, open
https://m.samyuktakarnataka.in
on your mobile browser.

೩೮೪ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಅಧಿಸೂಚನೆ

03:36 AM Feb 27, 2024 IST | Samyukta Karnataka
೩೮೪ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಅಧಿಸೂಚನೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) ೨೦೨೩-೨೪ನೇ ಸಾಲಿನ ೩೮೪ ಗೆಜೆಟೆಡ್‌ಪ್ರೊಬೇಷನರಿ'(ಕೆಎಎಸ್) ಹುದ್ದೆಗಳಿಗೆ ಆಯೋಗ ಅಧಿಸೂಚನೆ ಹೊರಡಿಸಿದೆ. ಮಾರ್ಚ್ ೪ ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಏಪ್ರಿಲ್ ೩ ರಂದು ಅರ್ಜಿ ಸಲ್ಲಿಕೆ ಕೊನೆ ದಿನವಾಗಿದೆ. ಅರ್ಜಿ ಸಲ್ಲಿಸಲು ಶುಲ್ಕ ಸಾಮಾನ್ಯ ವರ್ಗದವರಿಗೆ ೬೦೦ ರೂ.; ಪ್ರವರ್ಗ ೨ಎ, ೨ಬಿ, ೩ಎ, ೩ಬಿಗಳಿಗೆ ೩೦೦ ರೂ.; ಮಾಜಿ ಸೈನಿಕ ಅಭ್ಯರ್ಥಿಗಳಿಗೆ ೫೦ ರೂ.; ಎಸ್ಸಿ, ಎಸ್ಟಿ, ಪ್ರವರ್ಗ-೧, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಮೇ ೫ ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ ಎಂದು ಕೆಪಿಎಸ್‌ಸಿ ಪ್ರಭಾರಿ ಕಾರ್ಯದರ್ಶಿ ಡಾ.ರಾಕೇಶ್‌ಕುಮಾರ್.ಕೆ.ಅವರು ಸೋಮವಾರ ಅಧಿಸೂಚನೆ ಹೊರಡಿಸಿದ್ದಾರೆ. ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳೂ (ಹೈ.ಕ) ಸೇರಿದಂತೆ ಒಟ್ಟು ೩೮೪ ಹುದ್ದೆಗಳಲ್ಲಿ ಗ್ರೂಪ್-ಎ' ೧೫೯, ಗ್ರೂಪ್-`ಬಿ' ೨೨೫ ಹುದ್ದೆಗಳಿವೆ. ಕಲ್ಯಾಣ ಕರ್ನಾಟಕ ವೃಂದದ ಒಟ್ಟು ೭೭ ಹುದ್ದೆಗಳಿವೆ. ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಕನಿಷ್ಠ ೨೧ ವರ್ಷ ವಯಸ್ಸು ಮೀರಿದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ ೩೮; ಪ್ರವರ್ಗ ೨ಎ, ೨ಬಿ, ೩ಎ, ೩ಬಿಗಳಿಗೆ ೪೧ ವರ್ಷ ಹಾಗೂ ಎಸ್ಸಿ-ಎಸ್ಟಿ, ಪ್ರವರ್ಗ-೧ ಅಭ್ಯರ್ಥಿಗಳಿಗೆ ೪೩ ವರ್ಷ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ kpsc.kar.nic.in ಭೇಟಿ ನೀಡಲು ತಿಳಿಸಿದೆ.