For the best experience, open
https://m.samyuktakarnataka.in
on your mobile browser.

₹11 ಕೋಟಿಯ ಕಿರೀಟ ರಾಮಲಲ್ಲಾನಿಗೆ ಉಡುಗೊರೆ

03:46 PM Jan 23, 2024 IST | Samyukta Karnataka
₹11 ಕೋಟಿಯ ಕಿರೀಟ ರಾಮಲಲ್ಲಾನಿಗೆ ಉಡುಗೊರೆ

ಅಯೋಧ್ಯೆ: ಗುಜರಾತ್‌ ಮೂಲದ ವಜ್ರದ ವ್ಯಾಪಾರಿ ಮುಕೇಶ್‌ ಪಟೇಲ್‌ ಎಂಬುವರು ರಾಮಲಲ್ಲಾನಿಗೆ ಸುಮಾರು 11 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸೂರತ್‍ನಲ್ಲಿ ಗ್ರೀನ್ ಲ್ಯಾಬ್ ಡೈಮಂಡ್ ಕಂಪೆನಿ ಮಾಲೀಕರಾಗಿರುವ ಮುಖೇಶ್ ಪಟೇಲ್ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಕನಸು ಕಂಡಿದ್ದರು. ಅದರಂತೆ ಅದು ಸಾಕಾರಗೊಂಡಾಗ ಭಾವಪರವಶರಾಗಿರುವ ಅವರು ಶ್ರೀರಾಮನಿಗಾಗಿ ಆರು ಕೆಜಿ ಚಿನ್ನ ಬಳಸಿ ವಜ್ರ, ಮುತ್ತು, ಪಚ್ಚೆ ಸೇರಿದಂತೆ ಇತರ ಬೆಲೆಬಾಳುವ ವಸ್ತುಗಳನ್ನು ಅಳವಡಿಸಿ ಚಿನ್ನದ ಕಿರೀಟವನ್ನು ತಯಾರಿಸಿ ಅದನ್ನು ಶ್ರೀರಾಮನಿಗೆ ಸಮರ್ಪಿಸಿದ್ದಾರೆ. ಸುಮಾರು ಐದು ತಿಂಗಳ ಕಾಲ ವ್ರತ ಮಾಡಿ ಮಡಿಯಿಂದ ಈ ಕಿರೀಟ ತಯಾರಿಸಲಾಗಿದೆ. ನನ್ನ ತಂದೆ-ತಾಯಿ ಜತೆ ಇದನ್ನು ಶ್ರೀರಾಮ ಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಿದ್ದು, ನನಗೆ ಇದೊಂದು ಪವಿತ್ರ ಹಾಗೂ ಅವಿಸ್ಮರಣೀಯ ದಿನವಾಗಿದೆ ಎಂದು ಮುಖೇಶ್ ಪಟೇಲ್ ಹೇಳಿದ್ದಾರೆ.