ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

3 ವರ್ಷದಲ್ಲಿ 2,079 ಬಾಣಂತಿಯರ ಸಾವು

02:20 PM Nov 17, 2024 IST | Samyukta Karnataka

ಮಲ್ಲಿಕಾರ್ಜುನ ಚಿಲ್ಕರಾಗಿ
ಬಳ್ಳಾರಿ:
ಹೆರಿಗೆ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾ ಗದೇ ಕಳೆದ ಮೂರು ವರ್ಷದ ಅವಧಿಯಲ್ಲಿ ಬರೋಬ್ಬರಿ ೨೦೭೯ ಬಾಣಂತಿಯರು ಮರಣ ಹೊಂದಿದ್ದಾರೆ. ಇದರಲ್ಲಿ ೮೨೨ ಜನ ಹೆರಿಗೆ ಸಂದರ್ಭದಲ್ಲಿಯೇ ಪ್ರಾಣ ಬಿಟ್ಟಿರುವುದು ವರದಿಯಿಂದ ಬಯಲಾಗಿದೆ.
ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಮೂವರು ಬಾಣಂತಿಯರ ಸರಣಿ ಸಾವು ಪ್ರಕರಣ ರಾಜ್ಯದಲ್ಲಿ ತಲ್ಲಣ ಉಂಟು ಮಾಡಿದೆ. ಇನ್ನು ನಾಲ್ಕು ಬಾಣಂತಿಯರು ಗಂಭೀರ ಸ್ಥಿತಿಯಲ್ಲಿದ್ದು, ಬಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಬಳಿಕ ರಾಜ್ಯದ ಹಲವು ಕಡೆಗಳಲ್ಲಿ ಹೆರಿಗೆ ವೇಳೆ ಮೃತಪಟ್ಟವರ ಅಂಕಿ-ಸಂಖ್ಯೆ ತೆರೆದುಕೊಂಡಿದೆ. ಸರಕಾರಗಳು ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಹಲವು ಯೋಜನೆ ಜಾರಿ ಮಾಡಿದ್ದರೂ ಸಾವುಗಳು ಮಾತ್ರ ನಿಲ್ಲುತ್ತಿಲ್ಲ. ಗರ್ಭಾವಸ್ಥೆಯಲ್ಲಿಯೇ ರಕ್ತಹೀನತೆ ಉಳ್ಳವರು, ಗಂಡಾಂತರ ಎದುರಿಸುತ್ತಿರುವ ಗರ್ಭಿಣಿಯರು ಎಂದು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದರೂ ಹೆರಿಗೆ ಸಂದರ್ಭದಲ್ಲಿ ಉಂಟಾಗುತ್ತಿರುವ ಸಾವು-ನೋವಿನ ಪ್ರಮಾಣ ತಗ್ಗುತ್ತಿಲ್ಲ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಉಂಟಾದ ಬಾಣಂತಿಯರ ಸಾವಿನ ಸಮಗ್ರ ಸಂಖ್ಯೆ `ಸಂಯುಕ್ತ ಕರ್ನಾಟಕ'ಕ್ಕೆ ಲಭ್ಯವಾಗಿದೆ.

ಏರುತ್ತಲೇ ಇದೆ ಸಂಖ್ಯೆ
ಗರ್ಭಿಣಿ, ಬಾಣಂತಿಯರ ಮರಣ ತಡೆಗೆ ಹಲವು ಯೋಜನೆ ಜಾರಿಯಲ್ಲಿವೆ. ಇವುಗಳ ಅಡಿಯಲ್ಲಿ ಗರ್ಭಿಣಿ ಮಹಿಳೆಯ ಸಂಪೂರ್ಣ ದಾಖಲೀಕರಣ ನಡೆಯುತ್ತಿದೆ. ಗರ್ಭಾವಸ್ಥೆಯ ಮೂರು ತಿಂಗಳಿನಿಂದಲೇ ತಾಯಿ-ಮಗುವಿನ ಆರೋಗ್ಯ ತಪಾಸಣೆ ನಡೆಯುತ್ತಿದೆ. ರಕ್ತಹೀನತೆಯಿಂದ ಬಳಲುತ್ತಿ ರುವವರು, ತೀವ್ರ ರಕ್ತ ಹೀನತೆ ಯಿಂದ ಬಳಲುತ್ತಿರುವವರನ್ನು ಪಟ್ಟಿ ಮಾಡಿ ಚಿಕಿತ್ಸೆ ಮಾಡಲಾಗುತ್ತದೆ. ಅಲ್ಲದೇ ಹೆರಿಗೆ ಬಳಿಕವೂ ಗಂಡಾಂತರ ಹೆರಿಗೆಯಾದ ತಾಯಂದಿರು ಎಂದು ಗುರುತಿಸಿ ಪ್ರತ್ಯೇಕ ಚಿಕಿತ್ಸೆಯೂ ನೀಡುತ್ತಿದೆ. ಆದರೆ ಚಿಕಿತ್ಸೆ ಬಳಿಕವೂ ಈ ಸಂಖ್ಯೆ ತಗ್ಗದೇ ಏರಿಕೆಯಾಗುತ್ತಿದೆ.

೨೦೨೧-೨೨ರಿಂದ ೨೦೨೪ರ ಸೆಪ್ಟೆಂಬರ್ ಅಂತ್ಯಕ್ಕೆ ೨,೦೭೯ ಬಾಣಂತಿಯರ ಸಾವು
೨೦೨೧-೨೨ರಲ್ಲಿ ೭೮೨, ೨೦೨೨-೨೩ರಲ್ಲಿ ೬೯೯, ೨೦೨೩-೨೪ರ ಸೆಪ್ಟೆಂಬರ್‌ವರೆಗೆ ೫೯೮ ಜನ ಮರಣ
ಹೆರಿಗೆ ಅವಧಿಯಲ್ಲಿ ೨೦೨೧-೨೨ರಲ್ಲಿ ೩೫೦, ೨೦೨೨-೨೩ರಲ್ಲಿ ೨೬೮, ೨೦೨೪ರ ಸೆಪ್ಟೆಂಬರ್‌ವರೆಗೆ ೨೦೪ ಸಾವು

Tags :
#Deathbellari
Next Article