MPM ಪುನಾರಂಭಕ್ಕೆ ಮಹತ್ವದ ಚರ್ಚೆ
07:07 PM Feb 21, 2024 IST | Samyukta Karnataka
ಬೆಂಗಳೂರು: ಗುಣಮಟ್ಟದ ಕಾಗದಕ್ಕೆ ದೇಶದಲ್ಲೇ ಹೆಸರುವಾಸಿಯಾಗಿದ್ದ ಮೈಸೂರು ಕಾಗದ ಕಾರ್ಖಾನೆ (MPM)ಗೆ ಬೀಗ ಮುದ್ರೆ ಬಿದ್ದಿದ್ದು ಪುನಶ್ಚೇತನ ನೀಡುವ ಕುರಿತಂತೆ ಸಚಿವ ಎಂ. ಬಿ. ಪಾಟೀಲ ಇಂದು ಮಹತ್ವದ ಸಭೆ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು 40 ವರ್ಷಗಳ ಅವಧಿಗೆ 20,005 ಹೆಕ್ಟೇರ್ ಅರಣ್ಯ ಭೂಮಿ ಹಸ್ತಾಂತರ; ನೀಲಗಿರಿ ಬೆಳೆಯಲು MPMಗೆ ಅವಕಾಶ ನೀಡುವ ಸಂಬಂಧ ಚರ್ಚಿಸಿ, ಸೂಕ್ತ ತೀರ್ಮಾನ ಮಾಡಲು ಉನ್ನತಾಧಿಕಾರ ಸಮಿತಿ ರಚಿಸಲು ಸಭೆಯಲ್ಲಿ ನಿರ್ಣಯಿಸಿ, ತಿಂಗಳಲ್ಲಿ ವರದಿ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ, ವರ್ಚುವಲ್ ಮೂಲಕ ಶಿಕ್ಷಣ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಭದ್ರಾವತಿಯ ಶಾಸಕ ಬಿ.ಕೆ. ಸಂಗಮೇಶ್ವರ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇಂದಿನ ಸಭೆಯಲ್ಲಿ ಉಪಸ್ಥಿತರಿದ್ದರು.